KCS Media

ಮಣಿಪುರದಲ್ಲಿ ನಿಲ್ಲದ ಹಿಂಸೆ: ರಾಷ್ಟ್ರಮಟ್ಟದಲ್ಲಿ ಮಣಿಪೂರದ ಕ್ರೈಸ್ತರೊಂದಿಗೆ ಎಲ್ಲಾ ಕ್ರೈಸ್ತ ಸಮುದಾಯದವರು ನಿಲ್ಲಲು ಕರೆ; ಸ್ಟ್ಯಾನಿ ಪಿಂಟೋ

Share News

ಮಣಿಪುರದಲ್ಲಿ ಮೂವರು ಕುಕಿ ಚರ್ಚ್‌ ನಾಯಕರ ಭೀಕರ ಹತ್ಯೆ; ಮೆಣದ ಬತ್ತಿ ಜಾಗರಣೆ

ಇಂಪಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಕುಕಿ ಚರ್ಚ್ ಸಭಾ ಪಾಲಕರನ್ನು ಶಸ್ತ್ರಸಜ್ಜಿತ ಉಗ್ರರು ಹೊಂಚು ಹಾಕಿ ಹತ್ಯೆ ಮಾಡಿದ ಘಟನೆ ರಾಜ್ಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಚುರಾಚಂದ್‌ಪುರದಲ್ಲಿ ನಡೆದ ಪ್ರಾರ್ಥನೆಯಿಂದ ಹಿಂತಿರುಗುತ್ತಿದ್ದ ವೇಳೆ ದಾಳಿ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಸಾವನ್ನಪ್ಪಿದವರಲ್ಲಿ ಥಡೌ ಬ್ಯಾಪ್ಟಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ರೆವ್. ಡಾ. ವುಮ್‌ಥಾಂಗ್ ಸಿಟ್‌ಲೌ, ಕಾರ್ಯದರ್ಶಿ ರೆವ್. ಕೈಗೌಲುನ್ ಲೌವುಮ್ ಹಾಗೂ ಪಾಸ್ಟರ್. ಪಾವ್‌ಗೌಲೆನ್ ಸಿಟ್‌ಲೌ ಸೇರಿದ್ದಾರೆ.

ಘಟನೆಯನ್ನು ಖಂಡಿಸಿ ಕುಕಿ ಸಂಘಟನೆಗಳು 48 ಗಂಟೆಗಳ ಶಟ್‌ಡೌನ್ ಹಾಗೂ ಶೋಕಾಚರಣೆ ಘೋಷಿಸಿವೆ. ದೆಹಲಿಯ ಮುನಿರ್ಕಾದಲ್ಲಿ ನೂರಾರು ಜನರು ಮೇಣದಬತ್ತಿ ಜಾಗರಣೆ ನಡೆಸಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಘಟನೆ ಖಂಡಿಸಿ, ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಘಟನೆಯ ಕುರಿತಾಗಿ ಕರ್ನಾಟಕ ಕ್ರೈಸ್ತ ಸಂಘಟನೆಯಿಂದ ತೀವ್ರ ಅಕ್ಷೇಪಾ ವ್ಯಕ್ತವಾಗಿದೆ ಎಂದು ಕ್ರೈಸ್ತ ಸಂಘಟನೆಯ ರಾಜ್ಯಾಧ್ಯಕ್ಷರಾದ ಸ್ಟ್ಯಾನಿ ಪಿಂಟೋ ರವರು ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದ್ದಾರೆ, ಮಣಿಪೂರ್ವದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ ಈ ಹಿಂದೆಯೂ ಕೂಡ ಬಹಳಷ್ಟು ಜನ ಕ್ರೈಸ್ತರ ಹತ್ಯೆ ನಡೆದಿದೆ, ಚರ್ಚುಗಳನ್ನು ಸುಟ್ಟು ಹಾಕಿದ್ದಾರೆ, ಈಗ ಮತ್ತೆ ಮರುಕಳಿಸುವ ಘಟನೆಗಳು ಕಾಣಿಸುತ್ತಿದೆ, ಮೂರು ಜನ ಕ್ರೈಸ್ತ ಸಭಾ ಪಾಲಕರ ಹತ್ಯೆ ನಡೆದಿರುವುದು ಕ್ರೈಸ್ತ ಸಮುದಾಯಕ್ಕೆ ತುಂಬಲಾರದ ನೋವು ಉಂಟು ಮಾಡಿದೆ, ಈ ಹತ್ಯೆಗೆ ಕಾರಣವೇನು? ಕ್ರೈಸ್ತರ ಮೇಲೆ ಈ ರೀತಿಯ ಹೂನ್ನಾರ ಮಾಡಲು ಕಾರಣವೇನು? ಅಲ್ಲಿಯ ಬಿಜೆಪಿ ಸರ್ಕಾರ ಇಂಥ ಘಟನೆಗಳು ನಡೆಯಲು ಯಾಕೆ ಅವಕಾಶ ನೀಡುತ್ತಿದೆ? ಅಲ್ಲಿನ ಸ್ಥಳೀಯ ಕ್ರೈಸ್ತ ನಾಯಕರು ಕ್ರೈಸ್ತ ಸಭೆಗಳು ಒಗ್ಗಟ್ಟಾಗಿ ಇದನ್ನು ಖಂಡಿಸಬೇಕಾಗಿದೆ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿ ಎಲ್ಲಾ ಕ್ರೈಸ್ತ ಸಂಘ ಸಂಸ್ಥೆಗಳು ಸಂಘಟನೆಗಳು ಪಂಗಡಗಳು ಒಗ್ಗಟ್ಟಾಗಿ ಈ ಮಣಿಪುರದ ಘಟನೆಯನ್ನು ಖಂಡಿಸಬೇಕು ಮಾತ್ರವಲ್ಲ ಮಣಿಪುರದ ಕ್ರೈಸ್ತ ಜನತೆಯೊಂದಿಗೆ ಇಡೀ ರಾಷ್ಟ್ರ ಒಂದಾಗಿ ನಿಲ್ಲಬೇಕಾಗಿದೆ, ಇಲ್ಲದ ಪಕ್ಷದಲ್ಲಿ ಇವತ್ತು ಮಣಿಪುರ ನಾಳೆ ಕರ್ನಾಟಕ ನಾಡಿದ್ದು ಆಂಧ್ರಪ್ರದೇಶ ಹೀಗೆ ಕ್ರೈಸ್ತರ ಮೇಲೆ ನಿರಂತರ ದಾಳಿಗಳು ನಡೆಯುವ ದಿನಗಳು ದೂರವಿಲ್ಲ ಎಂದು ಅನಿಸುತ್ತಿದೆ

ನಿಮ್ಮೆಲ್ಲರ ಅನಿಸಿಕೆ ಅಭಿಪ್ರಾಯಗಳನ್ನು ವಾಟ್ಸಪ್ ಮೂಲಕ ತಿಳಿಸಿ ಎಂದು ಕೇಳಿಕೊಳ್ಳುತ್ತೇವೆ 9844703750 ( ಇದು (ಕರ್ನಾಟಕ ಕ್ರೈಸ್ತ ಸಂಘಟನೆಯ ವಾಟ್ಸಪ್ ನಂಬರ್)

Stany Pinto

Editor In Chief, KCS Media, Mob : 98867 59841

Leave a Reply

Your email address will not be published. Required fields are marked *

Solverwp- WordPress Theme and Plugin