KCS Media

ಅನ್ಯಾಯ ನಡೆದಾಗ ಸಹಿಸಿಕೊಂಡಿರೋದು ಕ್ರೈಸ್ತ ಧರ್ಮವಲ್ಲ!; ಗುಂಡಿನ ದಾಳಿಗೂ ಮುನ್ನ ಶೂಟರ್‌ ಬರೆದಿದ್ದ ಮ್ಯಾನಿಫೆಸ್ಟೋ ಬಹಿರಂಗ..Cole Tomas Allen

Share News

ಅನ್ಯಾಯ ನಡೆದಾಗ ಸಹಿಸಿಕೊಂಡಿರೋದು ಕ್ರೈಸ್ತ ಧರ್ಮವಲ್ಲ!; ಗುಂಡಿನ ದಾಳಿಗೂ ಮುನ್ನ ಶೂಟರ್‌ ಬರೆದಿದ್ದ ಮ್ಯಾನಿಫೆಸ್ಟೋ ಬಹಿರಂಗ..Cole Tomas Allen

ಅನ್ಯಾಯ ನಡೆದಾಗ ಸಹಿಸಿಕೊಂಡಿರೋದು ಕ್ರೈಸ್ತ ಧರ್ಮವಲ್ಲ!; ಗುಂಡಿನ ದಾಳಿಗೂ ಮುನ್ನ ಶೂಟರ್‌ ಬರೆದಿದ್ದ ಮ್ಯಾನಿಫೆಸ್ಟೋ ಬಹಿರಂಗ..Cole Tomas Allen

ಪ್ರಮುಖ ಮುಖ್ಯಾಂಶಗಳು

• ವಾಷಿಂಗ್ಟನ್ ಹಿಲ್ಟನ್ ಹೋಟೆಲ್ ಬಳಿ ಗುಂಡಿನ ದಾಳಿ ನಡೆಸಿದ ಕೋಲ್ ಥಾಮಸ್ ಅಲೆನ್

• ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಹೊರೆತುಪಡಿಸಿ ಟ್ರಂಪ್ , ಆಡಳಿತದ ಹಿರಿಯ ಅಧಿಕಾರಿಗಳು ಟಾರ್ಗೆಟ್

• ಬಾಲ್ ರೂಂ ತಲುಪುವ ಮೊದಲೇ ಕೋಲ್ ಥಾಮಸ್ ಅಲೆನ್ನನ್ನು ಸೆರೆ ಹಿಡಿದಿದ್ದ ಭದ್ರತಾ ಸಿಬ್ಬಂದಿ

• ಈ ಕೆಲಸ ಮಾಡಲು ಅಳು ಬರುತ್ತಿದೆ, ವಾಂತಿ ಬಂದಂತಾಗುತ್ತಿದೆ ಎಂದು ಬರೆದುಕೊಂಡಿದ್ದ ಅಲೆನ್

ವಾಷಿಂಗ್ಟನ್ : ಶ್ವೇತಭವನದ ವರದಿಗಾರರ ವಾರ್ಷಿಕ ಭೋಜನಕೂಟದ ವೇಳೆ ಹಿಲ್ಟನ್ ಹೋಟೆಲ್ ಹೊರಾಂಗಣದಲ್ಲಿ ಗುಂಡಿನದಾಳಿ ನಡೆಸಿದ ಕೋಲೆ ಥಾಮಸ್ ಅಲೆನ್ ಅನ್ನು ಅಮೆರಿಕದ ಸೀಕ್ರೆಟ್ ಸರ್ವೀಸ್ ಏಜೆಂಟ್ಸ್ ಬಂಧಿಸಿದ್ದಾರೆ. ಶಿಕ್ಷಕನಾಗಿದ್ದ ಥಾಮಸ್(Cole Tomas Allen) ದಾಳಿ ನಡೆಸಲು ಕಾರಣ ಏನು, ಈತ ಯಾರು ಎಂದು ಬೆನ್ನತ್ತಿದಾಗ ಅಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ.

ಕೋಲೆ ಥಾಮಸ್ ಅಲೆನ್  ಗುಂಡಿನ ದಾಳಿಗೂ ಹತ್ತು ನಿಮಿಷಕ್ಕೂ ಮುನ್ನ ಮ್ಯಾನಿಫೆಸ್ಟೋ(ಪ್ರಣಾಳಿಕೆ) ರೂಪದಲ್ಲಿ  ಬರೆದು ತನ್ನ ಕುಟುಂಬ ಸದಸ್ಯರಿಗೆ ಮೇಲ್ ಕಳುಹಿಸಿರುವ ಸಾಕ್ಷಿಗಳು ಸಿಕ್ಕಿದೆ. ಮ್ಯಾನಿಫೆಸ್ಟೋ ಮೇಲ್ನಲ್ಲಿ ಆತ ತನ್ನ ತೊಳಲಾಟ ಮತ್ತು ಯಾರನ್ನು ಗುರಿಯಾಗಿಸಿಕೊಂಡಿದ್ದಾನೆ ಎಂಬುದನ್ನು ಉಲ್ಲೇಖಿಸಿದ್ದಾರೆ.

ಶನಿವಾರ ರಾತ್ರಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮೆಲಾನಿಯಾ ಟ್ರಂಪ್ ಭಾಗಿಯಾಗಿದ್ದ ಹೈ ಪ್ರೊಫೈಲ್ ಡಿನ್ನರ್ ಪಾರ್ಟಿಯ ಬಳಿ ಗುಂಡಿನ ದಾಳಿ ನಡೆಸದಿತ್ತು. ಆನಂತರ ಕ್ಯಾಲಿಫೋರ್ನಿಯಾದ ಟೊರೆನ್ಸ್‌ನ 31 ವರ್ಷದ ಅಲೆನ್ ಸುಮಾರು 2,500 ಅತಿಥಿಗಳು ಸೇರಿದ್ದ ಬಾಲ್ ರೂಂ ತಲುಪುವ ಮೊದಲೇ ಭದ್ರತಾ ಚೆಕ್‌ಪಾಯಿಂಟ್‌ನಲ್ಲಿ ಬಿಗಿಹಿಡಿದು ಕಟ್ಟಿಹಾಕಲಾಯಿತು.

ಮ್ಯಾನಿಫೆಸ್ಟ್ನಲ್ಲಿ ಏನಿದೆ?

ಕೋಲ್ ಥಾಮಸ್ ಅಲೆನ್  ಕೋಲ್ ‘ಕೋಲ್ಡ್‌ಫೋರ್ಸ್’ ‘ಸ್ನೇಹಿ ಫೆಡರಲ್ ಅಸ್ಯಾಸಿನ್’ ಅಲೆನ್” ಎಂದು ದಾಖಲೆಗೆ ಸಹಿ ಹಾಕಿದ್ದಾರೆ. ಮ್ಯಾನಿಫೆಸ್ಟ್ನಲ್ಲಿ ಆತ ತಾನು ಮಾಡಲು ಹೊರಟಿರುವ ಕಾರ್ಯ ಸಂಪೂರ್ಣ ಸರಿ ಎಂದು ಸಮರ್ಥಿಸಿಕೊಂಡಿದ್ದಾನೆ.

ಒಬ್ಬ ವ್ಯಕ್ತಿ ಮೇಲೆ ದೌರ್ಜನ್ಯವಾದಾಗ ಸುಮ್ಮನೆ ಕೂರುವುದು ಕ್ರಿಶ್ಚಿಯನ್ ನಡವಳಿಕೆಯಲ್ಲ. ಬದಲಿಗೆ ಅದು ಅಪರಾಧಕ್ಕೆ ಸಾಥ್ ನೀಡಿದಂತೆ.  ನಾನು ಬಂಧನ ಶಿಬಿರದಲ್ಲಿ ಅತ್ಯಾಚಾರಕ್ಕೊಳಗಾದ ವ್ಯಕ್ತಿಯಲ್ಲ. ವಿಚಾರಣೆಗೆ ಒಳಪಡದೆ ಮರಣದಂಡನೆಗೆ ಗುರಿಯಾದ ಮೀನುಗಾರನಲ್ಲ. ನಾನು ಸ್ಫೋಟ ಘಟನೆಗಳಲ್ಲಿ ಬಲಿಯಾದ ಶಾಲಾ ಮಗುವಲ್ಲ.ಹಸಿವಿನಿಂದ ಬಳಲುತ್ತಿರುವ ಮಗು ನಾನಲ್ಲ. ಈ ಆಡಳಿತದಲ್ಲಿರುವ ಅನೇಕ ಅಪರಾಧಿಗಳಿಂದ ನಿಂದನೆಗೊಳಗಾದ ಹದಿಹರೆಯದ ಹುಡುಗಿಯಲ್ಲ. ಬೇರೆಯವರು ದೌರ್ಜನ್ಯಕ್ಕೊಳಗಾದಾಗ ಇನ್ನೊಂದು ಕೆನ್ನೆಯನ್ನು ತೋರಿಸುವುದು ಕ್ರೈಸ್ತ ಧರ್ಮದ ನಡವಳಿಕೆಯಲ್ಲ; ಅದು ದೌರ್ಜನ್ಯ ಎಸಗುವವನ ಅಪರಾಧಗಳಲ್ಲಿ ಭಾಗಿಯಾದಂತೆ ಎಂದು ಬರೆದುಕೊಂಡಿದ್ದಾರೆ.

ಮುಂದುವರೆದು,  ಒಬ್ಬ ಪೀಡೋಫೈಲ್  ಅಂದರೆ ಮಕ್ಕಳ ಮೇಲೆ ಕಾಮುಕ ಭಾವನೆ ಹೊಂದಿದವನು, ಅತ್ಯಾಚಾರಿ ಮತ್ತು ದೇಶದ್ರೋಹಿಯು ನನ್ನ ಕೈಗಳಿಗೆ ತನ್ನ ಅಪರಾಧಗಳ ಕಳಂಕವನ್ನು ಹಚ್ಚಲು ನಾನು ಇನ್ನು ಮುಂದೆ ಅವಕಾಶ ನೀಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ದಾಳಿ ಬಗ್ಗೆ ಏನಿತ್ತು

ಹಿಲ್ಟನ್ ಹೋಟೆಲ್ನಲ್ಲಿ ದಾಳಿ ಹೇಗೆ ನಡೆಸಬೇಕೆಂದು ಸಹ ಅಲೆನ್ ಪ್ಲ್ಯಾನ್ ಮಾಡಿಕೊಂಡು, ಮ್ಯಾನಿಫೆಸ್ಟೋದಲ್ಲಿ ಉಲ್ಲೇಖಿಸಿದ್ದ.

ಇಲ್ಲಾಗುತ್ತಿರುವ ಸಾವುನೋವುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ, ನಾನು ಸ್ಲಗ್‌ಗಳ ಬದಲಿಗೆ ಬಕ್‌ಶಾಟ್ ಬಳಸುತ್ತಿದ್ದೇನೆ. ಒಂದು ವೇಳೆ ಅನಿವಾರ್ಯವಾದರೆ, ನನ್ನ ಗುರಿಯನ್ನು ತಲುಪುವ ಸಲುವಾಗಿ ಇಲ್ಲಿರುವ ಬಹುತೇಕ ಜನರನ್ನು ಎದುರಿಸಲು ನಾನು ಸಿದ್ಧ. ಯಾಕೆಂದರೆ, ಒಬ್ಬ ಪೀಡೋಫೈಲ್, ಅತ್ಯಾಚಾರಿ ಮತ್ತು ದೇಶದ್ರೋಹಿಯ ಭಾಷಣ ಕೇಳಲು ಬಂದಿರುವ ಹೆಚ್ಚಿನ ಜನರು ಈ ಅಪರಾಧದಲ್ಲಿ ಭಾಗಿದಾರರು ಎಂಬುದು ನನ್ನ ಅಭಿಪ್ರಾಯ. ಆದರೆ, ಪರಿಸ್ಥಿತಿ ಅಷ್ಟು ಹಂತಕ್ಕೆ ಹೋಗುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಗುರಿ ಯಾರು?

ಅಲೆನ್ ತನ್ನ ಮ್ಯಾನಿಫೆಸ್ಟೋದಲ್ಲಿ ಆಡಳಿತದ ಉನ್ನತ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದ. ಅದರಲ್ಲಿ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಅವರನ್ನು ಮಾತ್ರ ಹೊರಗಿಟ್ಟು, ಉಳಿದ ಅಧಿಕಾರಿಗಳನ್ನು ಅವರ ಪದವಿಯ ಹಿರಿತನಕ್ಕೆ ಅನುಗುಣವಾಗಿ ಗುರಿಯಾಗಿಸಲು ನಿರ್ಧರಿಸಿದ್ದ.

ಭದ್ರತೆ ಬಗ್ಗೆ ಅಲೆನ್ ಟೀಕೆ

ನಾನು ಹೋಟೆಲ್  ಒಳಾಂಗಣಕ್ಕೆ ಹಲವು ಶಸ್ತ್ರಾಸ್ತ್ರ ಹಿಡಿದು ಎಂಟ್ರಿಯಾದೆ. ವಿಪರ್ಯಾಸ ಎಂದರೆ, ಯಾರು ನನನ್ನು ಏನೂ ಕೇಳಲಿಲ್ಲ. ತಡೆ ಹಿಡಿಯಲಿಲ್ಲ. ಒಂದು ವೇಳೆ ನಾನು ಇರಾನಿನ ಏಜೆಂಟ್ ಆಗಿದ್ದರೆ ದೊಡ್ಡ ಶಸ್ತ್ರಾಸ್ತ್ರವನ್ನೇ ಒಳಗೆ ತಂದು, ರಕ್ತಪಾತವನ್ನೇ ಹರಿಸಬಹುದಿತ್ತಯ ಎಂದು ಹೇಳಿಕೊಂಡಿದ್ದಾನೆ.

ನಾನು ಯಾರಿಗೂ ಹಾನಿ ಮಾಡಲು ಉದ್ದೇಶವನ್ನು ಹೊಂದಿಲ್ಲ. ಗೋಡೆಗಳ ಮೂಲಕ ಗುಂಡುಗಳು ಹಾಯ್ದು ಹೋಗಿ ಬೇರೆಯವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ತಾನು ‘ಬಕ್‌ಶಾಟ್’ ಗುಂಡುಗಳನ್ನು ಬಳಸುತ್ತಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ. ಔತಣಕೂಟಕ್ಕೆ ಬಂದವರು ಅಪರಾಧಿಗಳಿಗೆ ಬೆಂಬಲ ನೀಡುವವರು ಎನ್ನುವುದು ಅಲೆನ್ ಭಾವನೆಯಾಗಿತ್ತು.

ಅಳು ಬರ್ತಿದೆ..

ಈ ಕೆಲಸ ಮಾಡಲು ತುಂಬಾ ಕೆಟ್ಟದಾಗಿ ಅನಿಸುತ್ತಿದೆ, ವಾಂತಿ ಬಂದಂತಾಗುತ್ತಿದೆ, ಅಳಬೇಕೆನಿಸುತ್ತಿದೆ. ನಾನು ಮಾಡಬೇಕೆಂದಿದ್ದ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ನೋವಿದೆ. ಈ ಆಡಳಿತವು ಮಾಡಿರುವ ಎಲ್ಲವನ್ನೂ ನೆನೆದರೆ ನನಗೆ ತೀವ್ರ ಕೋಪ ಬರುತ್ತದೆ ಎಂದು ದಾಳಿಗೂ ಮುನ್ನ ಬರೆದುಕೊಂಡಿದ್ದಾನೆ. ಈ ಮೂಲಕ ಅಲೆನ್ ಮಾನಸಿಕವಾಗಿ ಎಷ್ಟು ತೊಳಲಾಡುತ್ತಿದ್ದ ಎನ್ನುವುದು  ತಿಳಿಯುತ್ತದೆ,(ಏಜೆನ್ಸೀಸ್).

Stany Pinto

Editor In Chief, KCS Media, Mob : 98867 59841

Leave a Reply

Your email address will not be published. Required fields are marked *

Solverwp- WordPress Theme and Plugin